   ಮೂಲದೊಡನೆ ಪರಿಶೀಲಿಸಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾರ್ಬೀನುಗಳು

ಡೈಆeóÉೂ ಮೀಥೇನ್ ಎಂಬ ಸಂಯುಕ್ತವನ್ನು ಹೆಚ್ಚು ಬಿಸಿ ಮಾಡಲಾಗಿ ನೈಟ್ರೊಜನ್ ಮತ್ತು ಪ್ರಬಲ ಪ್ರತಿಕ್ರಿಯಾಪೂರಿತ ಎರಡು ಪ್ರಭೇದಗಳು ಸಿಕ್ಕುತ್ತವೆ. ಇವುಗಳ ಪೈಕಿ ಒಂದರ ಹೆಸರು ಮೆಥಿಲೀನ್ ಮತ್ತೊಂದು ಹೆಸರು ಕಾರ್ಬೀನ್, ಇವೆರಡರ ಅಣುಸೂತ್ರವೂ , ಆದರೆ ಮೆಥಿಲೀನಿನಲ್ಲಿರುವ ಎರಡು ಎಲೆಕ್ಟ್ರಾನುಗಳು ಜೋಡಿ ಆಗಿರುವುದಿಲ್ಲ (ಇದಕ್ಕೆ ಟ್ರಿಪ್ಲೆಟ್ ಸ್ಥಿತಿ ಎಂದು ಹೆಸರು); ಕಾರ್ಬೀನಿನಲ್ಲಿರುವ ಎರಡು ಎಲೆಕ್ಟ್ರಾನುಗಳು ಜೋಡಿಯಾಗಿರುತ್ತವೆ. ಅಲ್ಲದೆ ಒಂದು ಎಲೆಕ್ಟ್ರಾನ್ ಕಕ್ಷೆ ಖಾಲಿ ಇರುತ್ತದೆ (ಇದಕ್ಕೆ ಸಿಂಗ್ಲೆಟ್ ಸ್ಥಿತಿ ಎಂದು ಹೆಸರು). ಬಹುಶಃ ಮೊದಲು ಸಿಕ್ಕುವಂಥ ಪದಾರ್ಥವಾದ ಕಾರ್ಬೀನಿನಲ್ಲಿ ಹೆಚ್ಚಿನ ಸ್ಥಿರತ್ವ ಇರುವುದಿಲ್ಲ; ಅಲ್ಲದೆ ಕಾರ್ಬೀನು ಬಹಳ ಹೊತ್ತಿನ ಅನಂತರ ನಿಧಾನವಾಗಿ ಮೆಥಿಲೀನ್ ಆಗಿ ಪರಿವರ್ತನೆಗೊಳ್ಳುತ್ತದೆ. 

ಡೈಅಜೊó    ಕಾರ್ಬೀನ್    ಮೆಥಿಲೀನ್

ಮೀಥೇನ್

ಕಾರ್ಬೀನುಗಳಲ್ಲಿ ಹೆಚ್ಚಿನ ಸ್ಥಿರತ್ವವಿಲ್ಲದಿರುವುದರಿಂದ ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಅವುಗಳ ಇರುವಿಕೆಯನ್ನು ರೋಹಿತದಿಂದ ನೋಡಬಹುದು. ಕಾರ್ಬೀನುಗಳು ಪ್ರತಿಕ್ರಿಯಾಪೂರಿತವಾಗಿರುವುದರಿಂದ ಎಷ್ಟೊ ಪ್ರತಿಕ್ರಿಯೆಗಳಲ್ಲಿ ಅವು ಮಧ್ಯವರ್ತಿಗಳಾಗಿರುವುದನ್ನು ಕಾಣಬಹುದು. 

 ದ್ವಿಬಂಧಕ್ಕೆ ಕೂಡಿಕೊಳ್ಳುವಿಕೆ: ಸಿಸ್ ಬ್ಯುಟೀನ್ ಅಥವಾ ಟ್ರಾನ್ಸ್ ಬ್ಯುಟೀನನ್ನು ಡೈಆeóÉೂೀಮೀಥೇನಿನ ಜೊತೆಗೆ ಕ್ಯುಪ್ರಸ್ ಕ್ಲೋರೈಡನ್ನು  ಅನ್ಯಪರಿಣಾಮಕಾರಿಯಗಿ ಉಪಯೋಗಿಸಿ ಪ್ರತಿಕ್ರಿಯೆಗೆ ಒಳಪಡಿಸಲಾಗಿ ಬರುವ ಕಾರ್ಬೀನು ದ್ವಿಬಂಧಕ್ಕೆ ಕೂಡಿಕೊಂಡು ಚಕ್ರಾಕಾರದ ಸಂಯುಕ್ತಗಳು ಕೆಳಗೆ ತೋರಿಸಿದಂತೆ ಆಗುತ್ತವೆ.

 

ಚಿತ್ರ-1

 

 ಸ್ಯಾಲಿಸಿಲಾಲ್ಡಿಹೈಡ್ ತಯಾರಿಕೆ : ಪ್ರಬಲ ಕ್ಷಾರಯುಕ್ತ ಫೀನಾಲನ್ನು  ಕ್ಲೋರೋಫಾರ್ಮಿನ ಜೊತೆ ಪ್ರತಿಕ್ರಿಯೆಗೆ ಒಳಪಡಿಸುವುದರಿಂದ ಒಂದು  ಗುಂಪು ಫೀನಾಲಿನ  ಗುಂಪಿಗೆ ಸಂಬಂಧಿಸಿದಂತೆ ಆರ್ಥೋ ಸ್ಥಾನದಲ್ಲಿ ಸೇರಿಕೊಳ್ಳುತ್ತದೆ; ಮತ್ತು ಸಾಲಿಸಿಲಾಲ್ಡಿಹೈಡು ತಯಾರಾಗುತ್ತದೆ. ಮೊದಲು ಕ್ಲೋರೊಫಾರ್ಮ್ ಕ್ಷಾರದ ಸಂಗಡ ಪ್ರತಿಕ್ರಿಯೆ ಹೊಂದಿ ಮಧ್ಯವರ್ತಿಯಾದ ಕಾರ್ಬೀನ್-ಡೈ-ಕ್ಲೋರೈಡ್ ತಯಾರಾಗುತ್ತದೆ.

 

ಚಿತ್ರ-2

 

ಕಾರ್ಬೀನ್ ಡೈ ಕ್ಲೋರೈಡು ಫೀನಾಲಿಗೆ ಕೂಡಿಕೊಂಡು ಕೆಳಗೆ ತೋರಿಸಿದಂತೆ ಸ್ಯಾಲಿ ಸಿಲಾಲ್ಡಿಹೈಡ್ ತಯಾರಾಗುತ್ತದೆ.

 

ಚಿತ್ರ-3

 

 ಈಥೈಲ್ ಫಾರ್ಮೇಟ್ ತಯಾರಿಕೆ: ಸೋಡಿಯಂ ಈಥೊಕ್ಸೈಡು ಕ್ಲೋರೋಪಾರ್ಮಿನೊಂದಿಗೆ ಪ್ರತಿಕ್ರಿಯೆಗೆ ಒಳಪಡುವುದರಿಂದ ಈಥೈಲ್ ಫಾರ್ಮೇಟ್ ತಯಾರಾಗುತ್ತದೆ.

ಮೊದಲು ಋಣವಿದ್ಯುದ್ವಾಹಿ ಈಥೊಕ್ಸೈಡ್ ಕಣ ಕ್ಲೋರೋಫಾರ್ಮಿನಿಂದ ಒಂದು ಪ್ರೋಟಾನನ್ನು ಬೇರ್ಪಡಿಸುವುದರಿಂದ ಕಾರ್ಬೀನ್ ಡೈಕ್ಲೋರೈಡ್ ಮಧ್ಯವರ್ತಿಯಾಗಿ ತಯಾರಾಗುತ್ತದೆ. (ಋಣ ವಿದ್ಯುದ್ವಾಹಿಗಳಾದ ಮೂರು ಕ್ಲೋರಿನ್ ಪರಮಾಣುಗಳ ಸಹಾಯದಿಂದ ಈ ಪ್ರತಿಕ್ರಿಯೆ ಆಗುತ್ತದೆ.)

 

ಕಾರ್ಬೀನ್-ಡೈ-ಕ್ಲೋರೈಡ್ ಮುಂದೆ ಕೆಳಗೆ ತೋರಿಸಿದಂತೆ ಪ್ರತಿಕ್ರಿಯೆ ಹೊಂದಿ ಈಥೈಲ್ ಫಾರ್ಮೇಟ್ ತಯಾರಾಗುತ್ತದೆ.

 ಚಕ್ರಾಕಾರದ ಪ್ರೋಪೀನುಗಳು: ಕಾರ್ಬೀನುಗಳು ಅಸಿಟಲೀನ್‍ಗಳ ಸಂಗಡ ಪ್ರತಿಕ್ರಿಯೆ ಹೊಂದಿ ಚಕ್ರಾಕಾರದ ಪ್ರೋಪೀನುಗಳು ಕೆಳಗೆ ತೋರಿಸಿದಂತೆ ಆಗುತ್ತವೆ.

 

ಚಿತ್ರ-4

 

 ಅಲ್ಲೀನ್‍ಗಳ ತಯಾರಿಕೆ: ಡೈಬ್ರೋಮೋ ಕಾರ್ಬೀನು ದ್ವಿಬಂಧಕ್ಕೆ ಕೂಡಿಕೊಂಡು ಬರುವ ಸಂಯುಕ್ತವನ್ನು ಮೆಗ್ನೀಸಿಯಂನೊಂದಿಗೆ ಈಥರ್ ಮಾಧ್ಯಮದಲ್ಲಿ ಪ್ರತಿಕ್ರಿಯೆಗೆ ಒಳಪಡುಸುವುದರಿಂದ ಬರುವ ಸಂಯುಕ್ತವೇ ಅಲ್ಲೀನು.

 

ಚಿತ್ರ-5

 

ಇವೇ ಮೊದಲಾದ ಪ್ರಮುಖ ಸಂಯುಕ್ತಗಳನ್ನು ತಯಾರಿಸುವುದರಲ್ಲಿ ಕಾರ್ಬೀನುಗಳ ಉಪಯೋಗ ಉಂಟು.

           

    (ಎಲ್.ಡಿ.ಎಂ.)